Não gostou? Não há problema! Pode devolver os artigos até 30 dias
Não há como errar com um vale de oferta. O presenteado pode escolher qualquer produto da nossa oferta.
Até 30 dias para devoluções
'ತೊಟ್ಟು ಕ್ರಾಂತಿ' ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
- ಶ್ರೀಧರ ಬಳಗಾರ
'ತೊಟ್ಟು ಕ್ರಾಂತಿ' ಕಥಾಸಂಕಲನವು ಅದರ ಹೊಸತನಕ್ಕೆ, ನಿಗೂಢತೆಗೆ, ವ್ಯಾಪಕತೆಗೆ ನಿದರ್ಶನ ಎಂಬಂತೆ ತೋರಿತು. ಪ್ರತಿಯೊಂದು ವಸ್ತುವಿನ ಆಯ್ಕೆಯಲ್ಲೂ ಹೊಸತನವಿದೆ. ಕಥಾವಸ್ತುವನ್ನು ಸೀಳಿ ಒಳನುಗ್ಗುವ ಕತೆಗಾರರ ಅನ್ವೇಷಕ ಹಾಗೂ ಚಿಕಿತ್ಸಕ ದೃಷ್ಟಿಯು ಇಲ್ಲಿನ ಕಥೆಗಳನ್ನು ಗೆಲ್ಲಿಸಿವೆ ಎಂಬುದು ನಿಸ್ಸಂದೇಹ.
-ಡಾ. ನಾ. ದಾಮೋದರ ಶೆಟ್ಟಿ
A Kannada book published by Chanda Pustaka/ ಛಂದ ಪುಸ್ತಕದ ಪ್ರಕಟಣೆ
Olá! Sou o Libroamiko, o seu conselheiro de livros.
Como posso ajudar?